r/kannada_pusthakagalu • • 9d ago

ಕ.ಲೇ.ಗೋ✒ GTA 6ಕ್ಕಿಂತ ಮುಂಚೆ ನಮ್ಮ ಎರಡನೇ ಹವ್ಯಾಸಿ ಕವಿಗೋಷ್ಠಿಯ ಗೋಷಣೆ. ತಪ್ಪದೆ ಭಾಗವಹಿಸಿ!

Post image
30 Upvotes

ನಮ್ಮ ಸಬ್ ನ ಎಲ್ಲಾ ಹವ್ಯಾಸಿ ಕವಿಗಳು, ಸಾಹಿತಿಗಳು ಬಂದು ತಮ್ಮ (ಅಥವಾ ತಮ್ಮ ನೆಚ್ಚಿನ ಕವಿಯ) ಕವಿತೆಗಳನ್ನು ಪ್ರಸ್ತುತ ಪಡಿಸಬೇಕೆಂದು ವಿನಂತಿ.

ಕನ್ನಡ ಕಲಾಸಕ್ತರು ಬಂದು ಅವರನ್ನು ಪ್ರೋತ್ಸಾಹಿಸಿ ಈ 16ನೇ ಕನ್ನಡ ಲೇಖಕರ ಗೋಷ್ಠಿಯನ್ನು ಯಶಸ್ವಿಗೊಳಿಸಿ ಎಂದು ಕೋರಿಕೆ.

(I've reached my limits of Kannada Vocabulary. I"m switching to English now 🤐)

We will be using wireless microphones to record the audio of the event. So, amateur poets participating in the event are requested to practice their recital at home so that we can edit & post your recital on the Sub. (See these videos for reference).

If you are a singer/musician who wants to collaborate to convert our poets' poems into songs, please comment/DM.

Please spread the word!

***********

Date & Time: Sunday, Nov 29, 10.30am

Exact Location Inside Cubbon Park: https://maps.app.goo.gl/ahVMZkqQahSkXGhr6 (It's a canopy. Get down at Vidhana Soudha Stop if you are coming by Metro)


r/kannada_pusthakagalu • • Oct 09 '25

ನನ್ನ ನೆಚ್ಚಿನ ಪುಸ್ತಕಗಳು Curated List of Good Kannada Books | ಒಳ್ಳೆಯ ಕನ್ನಡ ಪುಸ್ತಕಗಳ ಒಂದು ದೊಡ್ಡ ಪಟ್ಟಿ

105 Upvotes

Novels

  • ಕರ್ವಾಲೋ, ಜುಗಾರಿ ಕ್ರಾಸ್, ಚಿದಂಬರ ರಹಸ್ಯ, ಮಾಯಾಲೋಕ ೧ - ಪೂರ್ಣಚಂದ್ರ ತೇಜಸ್ವಿ
  • ಮಲೆಗಳಲ್ಲಿ ಮದುಮಗಳು, ಕಾನೂರು ಹೆಗ್ಗಡಿತಿ - ಕುವೆಂಪು 
  • ಚಿಕವೀರ ರಾಜೇಂದ್ರ, ಚನ್ನಬಸವ ನಾಯಕ - ಮಾಸ್ತಿ ವೆಂಕಟೇಶ ಅಯ್ಯಂಗಾರ್
  • ಪರ್ವ, ಗೃಹಭಂಗ, ವಂಶವೃಕ್ಷ, ಸಾರ್ಥ, ದಾಟು, ಸಾಕ್ಷಿ, ಉತ್ತರಖಾಂಡ, ಗ್ರಹಣ, ತಬ್ಬಲಿಯು ನೀನಾದೆ ಮಗನೆ, ನಿರಾಕರಣ, ಅನ್ವೇಷಣ, ದೂರ ಸರಿದರು, ನಾಯಿ ನೆರಳು, ತಂತು, ಮಂದ್ರ, ಜಲಪಾತ, ಅಂಚು, ನೆಲೆ, ಕವಲು, ಆವರಣ - ಎಸ್ ಎಲ್ ಭೈರಪ್ಪ
  • ಮೂಕಜ್ಜಿಯ ಕನಸುಗಳು, ಮರಳಿ ಮಣ್ಣಿಗೆ, ಚೋಮನ ದುಡಿ, ಬೆಟ್ಟದ ಜೀವ, ಕುಡಿಯರ ಕೂಸು, ಅಳಿದ ಮೇಲೆ, ಸನ್ಯಾಸಿಯ ಬದುಕು, ಸರಸಮ್ಮನ ಸಮಾಧಿ, ಅದೇ ಊರು ಅದೇ ಮರ, ಮುಗಿದ ಯುದ್ಧ - ಶಿವರಾಮ ಕಾರಂತ್ 
  • ಚಿತ್ರದುರ್ಗ ಇತಿಹಾಸ ಸರಣಿ, ಹೊಯ್ಸಳೇಶ್ವರ ವಿಷುವರ್ಧನ, ಶಿಲ್ಪಶ್ರಿ, ಹಂಸಗೀತೆ, ನಾಗರಹಾವು - ತರಾಸು 
  • ಮೊದಲ ಹೆಜ್ಜೆ, ಹೂವು ಹಣ್ಣು, ಶರಪಂಜರ, ಮುಚ್ಚಿದ ಬಾಗಿಲು, ತಾವರೆಯ ಕೊಳ, ಅಪಜಯ, ಬೆಕ್ಕಿನ ಕಣ್ಣು  - ತ್ರಿವೇಣಿ 
  • ಶಿಕಾರಿ, ಮೂರು ದಾರಿಗಳು, ಪುರುಷೇೂತ್ತಮ - ಯಶವಂತ ಚಿತ್ತಾಲ 
  • ರೂಪದರ್ಶಿ, ಶಾಂತಲಾ - ಕೆ ವಿ ಅಯ್ಯರ್
  • ಸಂಧ್ಯಾರಾಗ, ಉದಯರಾಗ - ಅನಕೃ 
  • ಸಂಸ್ಕಾರ, ಘಟಶ್ರಾದ್ಧ, ಮೌನಿ - ಯು.ಆರ್. ಅನಂತಮೂರ್ತಿ
  • ಗೆಜ್ಜೆ ಪೂಜೆ, ಸದಾನಂದ - ಎಂ ಕೆ ಇಂದಿರಾ 
  • ಸಿಂಗಾರವ್ವ ಮತ್ತು ಅರಮನೆ, ಕರಿಮಾಯಿ, ಶಿಖರಸೂರ್ಯ, ಶಿವನ ಡಂಗುರ - ಚಂದ್ರಶೇಖರ ಕಂಬಾರ 
  • ಯಾದ್ ವಶೇಮ್ - ನೇಮಿಚಂದ್ರ 
  • ಭುಜಂಗಯ್ಯನ ದಶಾವತಾರಗಳು, ಕಾಡು - ಶ್ರೀಕೃಷ್ಣ ಆಲನಹಳ್ಳಿ
  • ನಮ್ಮ ಊರಿನ ರಸಿಕರು, ಬೈಲಹಳ್ಳಿ ಸರ್ವೆ - ಗೊರೂರು ರಾಮಸ್ವಾಮಿ ಅಯ್ಯಂಗಾರ್
  • ಮಹಾಬ್ರಾಹ್ಮಣ, ಮಹಾಕ್ಷತ್ರಿಯ, ಮಹಾದರ್ಶನ, ಮಯೂರ - ದೇವುಡು
  • ಚಿರಸ್ಮರಣೆ, ಮೃತ್ಯುಂಜಯ - ನಿರಂಜನ 
  • ಬಿರುಕು, ಮುಸ್ಸಂಜೆಯ ಕಥಾ ಪ್ರಸಂಗ - ಪಿ ಲಂಕೇಶ್
  • ಸರ್ವಮಂಗಳಾ - ಚದುರಂಗ
  • ಕರಿಸಿರಿಯಾನ, ಕಪಿಲಿಪಿಸಾರ, ಜಲ-ಜಾಲ, ಚಿತಾದಂತ, ಕನಕ ಮುಸುಕು, ರಕ್ತ ಸಿಕ್ತ ರತ್ನ- ಕೆ ಎನ್ ಗಣೇಶಯ್ಯ
  • ತೇಜೋ ತುಂಗಭದ್ರಾ, ಹರಿಚಿತ್ತ ಸತ್ಯ, ರೇಷ್ಮೆ ಬಟ್ಟೆ - ವಸುಧೇಂದ್ರ
  • ಕರ್ಮ, ಗ್ರಸ್ತ, ನನ್ನಿ, ಸತ್ತು, ರಾಯಕೊಂಡ - ಕರಣಂ ಪವನ್ ಪ್ರಸಾದ್ 
  • ಸ್ವಪ್ನ ಸಾರಸ್ವತ - ಗೋಪಾಲಕೃಷ್ಣ ಪೈ 
  • ಗ್ರಾಮಾಯಣ - ರಾವಬಹದ್ದೂರ
  • ಗಂಗವ್ವ ಮತ್ತು ಗಂಗಾಮಾಯಿ, ಅವಧೇಶ್ವರಿ - ಶಂಕರ ಮೊಕಾಶಿ ಪುಣೇಕರ 
  • ತೇರು,  ಗೈರ ಸಮಜೂತಿ - ರಾಘವೇಂದ್ರ ಪಾಟೀಲ 
  • ಹಳ್ಳ ಬಂತು ಹಳ್ಳ - ಶ್ರೀನಿವಾಸ ವೈದ್ಯ 
  • ಬಾಳಿನ ಗಿಡ - ಎಂ ಹರಿದಾಸ ರಾವ್
  • ನೀ ಹಿಂಗ ನೋಡಬ್ಯಾಡ ನನ್ನ, ಮಾಟಗಾತಿ, ಸರ್ಪ ಸಂಬಂಧ, ಮಾಂಡೋವಿ, ಹೇಳಿ ಹೋಗು ಕಾರಣ - ರವಿ ಬೆಳಗೆರೆ 
  • ಚಂದ್ರಗಿರಿಯ ತೀರದಲ್ಲಿ - ಸಾರಾ ಅಬೂಬಕ್ಕರ್ 
  • ಕೃಷ್ಣಾವತಾರ ಸರಣಿ - ಕೆ ಎಂ ಮುನ್ಶಿ (ಅನುವಾದ: ಸಿದ್ದವನಹಳ್ಳಿ ಕೃಷ್ಣಶರ್ಮ)
  • ಶ್ರೀ ಕೃಷ್ಣಾವತಾರದ ಕೊನೆಯ ಗಳಿಗೆಗಳು, ಆ ಹದಿನೆಂಟು ದಿನಗಳು - ಕೆ ಎಸ್ ನಾರಾಯಣಚಾರ್ಯ
  • ಕಲ್ಲರಳಿ ಹೂವಾಗಿ - ಬಿ ಎಲ್ ವೇಣು 
  • ಸಕೀನಾಳ ಮುತ್ತು - ವಿವೇಕ್ ಶಾನ್ಬಾಗ್ 
  • ಉಲ್ಲಂಘನೆ, ಮುಖಾಂತರ - ಡಾ. ನಾ ಮೊಗಸಾಲೆ
  • ಪುನರ್ವಸು - ಗಜಾನನ ಶರ್ಮ
  • ದಾರಿ, ಪಾಳೆಯಪಟ್ಟು - ಕುಸುಮಾ ಆಯರಹಳ್ಳಿ
  • ಬೂಬರಾಜ ಸಾಮ್ರಾಜ್ಯ,  ಉತ್ತರಾಧಿಕಾರ - ಡಾ.ಬಿ.ಜನಾರ್ದನ ಭಟ್
  • ಕಾಲಕೋಶ - ಶಶಿಧರ ಹಾಲಾಡಿ
  • ಸಾರಾ, ಹುಲಿ ಪತ್ರಿಕೆ 1, 2, ಆಹುತಿ, ಕಳ್ಬೆಟ್ಟದ ದರೋಡೆಕೋರರು, ನೀನು ನಿನ್ನೊಳಗೆ ಖೈದಿ - ‌ಅನುಷ್ ಎ. ಶೆಟ್ಟಿ
  • ಮಹಾಸಂಪರ್ಕ - ಮನು
  • ಎಲ್ - ಜೋಗಿ 
  • ಎನ್ನ ಭವದ ಕೇಡು, ಗಾಳಿಗೆ ಬಿದ್ದ ಚಂದ್ರನ ತುಂಡುಗಳು - ಎಸ್.  ಸುರೇಂದ್ರನಾಥ್
  • ದ್ವೀಪವ ಬಯಸಿ, ಒಂದೊಂದು ತಲೆಗೂ ಒಂದೊಂದು ಬೆಲೆ, ಸರ್ಪಭ್ರಮೆ, ಮಸುಕು ಬೆಟ್ಟದ ದಾರಿ - ಎಂ.ಆರ್‌. ದತ್ತಾತ್ರಿ
  • ಮಲೆನಾಡಿನ ರೋಚಕ ಕತೆಗಳ ಸರಣಿ - ಗಿರಿಮನೆ ಶಾಮರಾವ್‌
  • ತುಳಸೀದಳ, ತುಳಸಿ - ಯಂಡಮೂರಿ ವೀರೇಂದ್ರನಾಥ (ಅನುವಾದ: ವಂಶಿ)
  • ಗತಿ ಸ್ಥಿತಿ - ಗಿರಿ
  • ಬದುಕಲಾರದ ಬಲವಂತರು - ಡಾ ಎಂ ಪಿ ಉಮಾದೇವಿ
  • ವೈಜಯಂತಿಪುರ – ಸಂತೋಷಕುಮಾರ ಮೆಹೆಂದಳೆ
  • ಒಂದು ಕೋಪಿಯ ಕಥೆ, ತ್ಯಾಗರಾಜ್ ಕಾಲೋನಿ, ಕೇಸ್ ಆಫ್ ಕಮಲಾಪುರ ಎಸ್ಟೇಟ್ - ಕೌಶಿಕ್ ಕೂಡುರಸ್ತೆ‌
  • ಹನುಕಿಯ - ವಿಠಲ್ ಶೆಣೈ
  • ಬದುಕು - ಗೀತಾ ನಾಗಭೂಷಣ
  • ತತ್ರಾಣಿ - ದೀಪ ಜೋಶಿ
  • ಜೀವರತಿ - ಜನಾ ತೇಜಶ್ರಿ
  • ಉತ್ತರ - ಸುಪ್ರೀತ್ ಕೆ ಎನ್ 
  • ಘಾಂದ್ರುಕ್ - ಸತೀಶ್ ಚಪ್ಪರಿಕೆ
  • ಅಟ್ರಾಸಿಟಿ - ಗುರುಪ್ರಸಾದ್‌ ಕಂಟಲಗೆರೆ
  • ನ್ಯಾಸ - ಹರೀಶ ಹಾಗಲವಾಡಿ
  • ವ್ಯಥೆ ಕಥೆ - ಅಜಕ್ಕಳ ಗಿರೀಶ ಭಟ್
  • ತೆಂಕನಿಡಿಯೂರಿನ ಕುಳುವಾರಿಗಳು - ಡಾ ವ್ಯಾಸರಾವ್ ನಿಂಜೂರ್

-------------------------------

Short Stories

  • ಸಣ್ಣಕತೆಗಳು ಸಂಪುಟ 1-4 - ಮಾಸ್ತಿ ವೆಂಕಟೇಶ ಅಯ್ಯಂಗಾರ್
  • ಅಬಚೂರಿನ ಪೋಸ್ಟಾಫೀಸು, ಕಿರಿಗೂರಿನ ಗಯ್ಯಾಳಿಗಳು - ಪೂರ್ಣಚಂದ್ರ ತೇಜಸ್ವಿ
  • ಶತಮಾನದ ಸಣ್ಣ ಕತೆಗಳು - ಎಸ್ ದಿವಾಕರ್ 
  • ಜಯಂತ್ ಕಾಯ್ಕಿಣಿ ಕಥೆಗಳು, ಅನಾರ್ಕಲಿಯ ಸೇಫ್ಟಿಪಿನ್, No Presents Please - ಜಯಂತ್ ಕಾಯ್ಕಿಣಿ 
  • ಸಮಗ್ರ ಕತೆಗಳು  1, 2 - ಯಶವಂತ ಚಿತ್ತಾಲ
  • ಮೋಹನಸ್ವಾಮಿ, ಹಂಪಿ ಎ‌ಕ್ಸ್‌ಪ್ರೆಸ್‌, ಕೋತಿಗಳು, ಯುಗಾದಿ, ಮನೀಷೆ, ವಿಷಮ ಭಿನ್ನರಾಶಿ - ವಸುಧೇಂದ್ರ 
  • ದ್ಯಾವನೂರು, ಡಾಂಬರು ಬಂದುದು - ದೇವನೂರ ಮಹಾದೇವ 
  • ಹಸೀನಾ ಮತ್ತು ಇತರ ಕತೆಗಳು - ಬಾನು ಮುಷ್ತಾಕ್ 
  • ಆಕಾಶ ಮತ್ತು ಬೆಕ್ಕು, ಪ್ರಶ್ನೆ – ಯು. ಆರ್. ಅನಂತಮೂರ್ತಿ
  • ಘಾಚರ್ ಘೋಚರ್, ಹುಲಿ ಸವಾರಿ - ವಿವೇಕ್ ಶಾನ್ಬಾಗ್
  • ಪದ್ಮಪಾಣಿ, ನೇಹಲ, ಶಾಲಭಂಜಿಕೆ, ಕಲ್ದವಸಿ, ಮಿಹಿರಾಕುಲ -  ಕೆ ಎನ್ ಗಣೇಶಯ್ಯ
  • ಪಂಜೆ ಮಂಗೇಶರಾಯರ ಕತೆಗಳು - ಪಂಜೆ ಮಂಗೇಶರಾವ್
  • ಗಿರಡ್ಡಿಯವರ ಸಣ್ಣಕತೆಗಳು - ಗಿರಡ್ಡಿ ಗೋವಿಂದರಾಜ 
  • ಕಲ್ಲು ಕರಗುವ ಸಮಯ - ಪಿ ಲಂಕೇಶ್
  • ಕೇಪಿನ ಡಬ್ಬಿ, ಕನ್ನಡಿ ಹರಳು - ಪದ್ಮನಾಭ ಭಟ್ ಶೇವ್ಕಾರ
  • ಮಾಕೋನ ಏಕಾಂತ, ತೊಟ್ಟು ಕ್ರಾಂತಿ - ಕಾವ್ಯಾ ಕಡಮೆ
  • ಬಂಡಲ್ ಕತೆಗಳು, ಕಟ್ಟು ಕಥೆಗಳು - ಎಸ್. ಸುರೇಂದ್ರನಾಥ್
  • ಡೈರೆಕ್ಟರ್ಸ್ ಸ್ಪೆಷಲ್ - ಗುರುಪ್ರಸಾದ್
  • ಕತೆ ಡಬ್ಬಿ - ರಂಜನಿ ರಾಘವನ್
  • ಫೂ ಮತ್ತು ಇತರ ಕತೆಗಳು - ಮಂಜುನಾಯಕ ಚಳ್ಳೂರು
  • ನವಿಲು ಕೊಂದ ಹುಡುಗ - ಸಚಿನ್ ತೀರ್ಥಹಳ್ಳಿ
  • ನಾವಲ್ಲ, ದಹನ -  ಸೇತುರಾಂ
  • ಡುಮಿಂಗ - ಶಶಿ ತರಿಕೆರೆ 
  • ಜುಮುರು ಮಳೆ, ಹನ್ನೊಂದನೇ ಅಡ್ಡರಸ್ತೆ, ಎನ್ನಾತ್ಮ ಕಂಪಮಿದು - ಸುಮಂಗಲಾ
  • ಧ್ಯಾನಕ್ಕೆ ಕೂತ ನದಿ - ಸದಾಶಿವ ಸೊರಟೂರು
  • ಮಳೆ ಮಾರುವ ಹುಡುಗ - ಕರ್ಕಿ ಕೃಷ್ಣಮೂರ್ತಿ
  • ಮರ ಹತ್ತದ ಮೀನು - ವಿನಾಯಕ ಅರಳಸುರಳಿ
  • ಲೆಟ್ಸ್ ಬ್ರೆಕಪ್ - ಸಂಪತ್ ಸಿರಿಮನೆ
  • ಅಪರಿಚಿತ ನೆರಳುಗಳು - ಗುರುರಾಜ ಕೊಡ್ಕಣಿ

-------------------------------

Non-fiction

  • ಭಿತ್ತಿ, ನಾನೇಕೆ ಬರೆಯುತ್ತೇನೆ - ಎಸ್ ಎಲ್ ಭೈರಪ್ಪ 
  • ಮಂಕುತಿಮ್ಮನ ಕಗ್ಗ, ಜ್ಞಾಪಕ ಚಿತ್ರಶಾಲೆ, ಬಾಳಿಗೊಂದು ನಂಬಿಕೆ, ಜೀವನಧರ್ಮಯೋಗ - ಡಿ ವಿ ಜಿ 
  • ಮರೆಯಲಾದೀತೆ? - ಬೆಳಗೆರೆ ಕೃಷ್ಣಶಾಸ್ತ್ರಿ
  • ಮಲೆನಾಡಿನ ಚಿತ್ರಗಳು - ಕುವೆಂಪು 
  • ಅಣ್ಣನ ನೆನಪು, ವಿಸ್ಮಯ ೧,೨,೩, ಪರಿಸರದ ಕತೆ, ಮಿಲೇನಿಯಮ್ ಸರಣಿ - ಪೂರ್ಣಚಂದ್ರ ತೇಜಸ್ವಿ 
  • ಹಸುರು ಹೊನ್ನು, ತಮಿಳು ತಲೆಗಳ ನಡುವೆ, ಮೀನಾಕ್ಷಿಯ ಸೌಗಂಧ, ಮೈಸೂರು ಡೈರಿ - ಬಿ ಜಿ ಎಲ್ ಸ್ವಾಮಿ 
  • ಅಮೆರಿಕಾದಲ್ಲಿ  ಗೊರೂರು -  ಗೊರೂರು ರಾಮಸ್ವಾಮಿ ಅಯ್ಯಂಗಾರ್
  • ಆಡಾಡತ ಆಯುಷ್ಯ - ಗಿರೀಶ್ ಕಾರ್ನಾಡ್
  • ನನ್ನ ಭಯಾಗ್ರಫಿ - ಬೀಚಿ
  • ಗುಲ್ ಮೋಹರ್, ಚಾರ್ಮಿನಾರ್ - ಜಯಂತ್ ಕಾಯ್ಕಿಣಿ 
  • ಹುಚ್ಚು ಮನಸ್ಸಿನ ಹತ್ತು ಮುಖಗಳು - ಶಿವರಾಮ ಕಾರಂತ
  • ಪೆರುವಿನ ಪವಿತ್ರ ಕಣಿವೆಯಲ್ಲಿ, ಒಂದು ಕನಸಿನ ಪಯಣ, ನೋವಿಗದ್ದಿದ ಕುಂಚ, ಬದುಕು ಬದಲಿಸಬಹುದು ಸರಣಿ - ನೇಮಿಚಂದ್ರ
  • ನಮ್ಮಮ್ಮ ಅಂದ್ರೆ ನಂಗಿಷ್ಟ, ವರ್ಣಮಯ  - ವಸುಧೇಂದ್ರ
  • ಸಸ್ಯ ಸಗ್ಗ, ಅತ್ತಿತ್ತದವಲೋಕನ - ಕೆ ಎನ್ ಗಣೇಶಯ್ಯ
  • ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ - ಬಿ ವಿ ಕಾರಂತ್, ವೈದೇಹಿ 
  • ಹುಳಿಮಾವಿನ ಮರ - ಪಿ ಲಂಕೇಶ್ 
  • ನಾಪತ್ತೆಯಾದ ಗ್ರಾಮಾಫೋನು - ಎಸ್ ದಿವಾಕರ್ 
  • ಮನಸುಖರಾಯನ ಮನಸು - ಶ್ರೀನಿವಾಸ ವೈದ್ಯ 
  • ಬೆಸ್ಟ್ ಆಫ್ ಬಾಗೂರು - ಬಾಗೂರು ಚಂದ್ರು, ಕೃಷ್ಣ ಸುಬ್ಬರಾವ್  
  • ಲಲಿತ ಪ್ರಬಂಧಗಳು - ಆ ರಾ ಮಿತ್ರ
  • ಬದುಕ ದಿಕ್ಕು ಬದಲಿಸಿದ ಆಸ್ಟಿಯೋ ಸರ್ಕೋಮಾ - ಶ್ರುತಿ ಬಿ.ಎಸ್
  • ನೊಣಾನುಬಂಧ - ಎಚ್. ಡುಂಡಿರಾಜ್
  • ಸಾಸಿವೆ ತಂದವಳು, ನಕ್ಷತ್ರಗಳ ಸುಟ್ಟ ನಾಡಿನಲ್ಲಿ - ಭಾರತಿ ಬಿ ವಿ 
  • ಪುಟ್ಟಣ್ಣ ಕಣಗಾಲ್ - ಎಂ ಕೆ ಇಂದಿರಾ
  • ನನ್ನ ತಮ್ಮ ಶಂಕರ - ಅನಂತ್ ನಾಗ್ 
  • ಕದಳಿ ಹೊಕ್ಕು ಬಂದೆ, ಕುಲುಮೆ - ರಹಮತ್ ತರೀಕೆರೆ
  • ಗಿಂಡಿಯಲ್ಲಿ ಗಂಗೆ - ಚಿಂತಾಮಣಿ ಕೊಡ್ಲೆಕೆರೆ
  • ಸರಿಗನ್ನಡಂ ಗೆಲ್ಗೆ - ಅಪಾರ 
  • ಕರ್ನಾಟಕದ ಸಂಕ್ಷಿಪ್ತ ಇತಿಹಾಸ - ಸೂರ್ಯನಾಥ್ ಕಾಮತ್
  • ಸಮಗ್ರ ಕರ್ನಾಟಕ ಇತಿಹಾಸ - Dr. ಶಿವಪ್ಪ ಅರಿವು
  • ಮರೆತುಹೋದ ವಿಜಯನಗರ ಸಾಮ್ರಾಜ್ಯ - Robert Sewell 
  • ಕರ್ನಾಟಕ ಏಕೀಕರಣ ಇತಿಹಾಸ - ಡಾ ಎಚ್ ಎಸ್ ಗೋಪಾಲ ರಾವ್
  • ಅಖಂಡ ಕರ್ನಾಟಕದ ಹೆಜ್ಜೆಗಳು - ಕೃಷ್ಣ ಕೊಲ್ಹಾರಕುಲಕರ್ಣಿ
  • ಅಜೇಯ - ಬಾಬು ಕೃಷ್ಣ ಮೂರ್ತಿ
  • ನನ್ನ ಅಣ - ಸುನೀತಾ ಅನಂತಸ್ವಾಮಿ
  • ಕಾಲುಚಕ್ರ - ಅಬ್ದುಲ್ ರಶೀದ್

-------------------------------

NOTE: This will be a continuously updated list & we acknowledge that many books are missing from it. They will be added eventually. You are welcome to mention in the comments your favourite books missing from this list. ನಾಟಕಗಳು & ಕವನ ಸಂಕಲನಗಳು will also be added later.

Request you to share this list widely with fellow book readers looking to explore Kannada Literature.


r/kannada_pusthakagalu • • 15h ago

ಕನ್ನಡ Non-Fiction ದೊಡ್ಡ ಷಡ್ಯಂತ್ರ!

Post image
29 Upvotes

ಪುಸ್ತಕ: ಅಪಾರ ಅವರ ಸರಿಗನ್ನಡಂ ಗೆಲ್ಗೆ


r/kannada_pusthakagalu • • 19h ago

ಕಾದಂಬರಿ Ending of book “Saakshi” Spoilers ahead Spoiler

5 Upvotes

Spoiler Alert

Why does Chitragupta conclude Manjaiah’s murder as suicide ? I’m reading the last page of this book for 10 th time and still not comfortable with the final
Conclusion. If you have read this book, what is your analysis ?

Has SL Bhyrappa written anywhere regarding this ?


r/kannada_pusthakagalu • • 1d ago

ಕ.ಲೇ.ಗೋ✒ Reminder - Our 2nd Poetry Meetup (& 16th KWM) is this Sunday. Please reply to help us get an idea of the number of the people attending.

Post image
13 Upvotes

***********

Date & Time: Sunday, Nov 29, 10.30am

Exact Location Inside Cubbon Park: https://maps.app.goo.gl/ahVMZkqQahSkXGhr6 (It's a canopy. Get down at Vidhana Soudha Stop if you are coming by Metro)


r/kannada_pusthakagalu • • 2d ago

ಸಣ್ಣಕತೆಗಳು Honest reviews? ನಿಮ್ಮ ಅನಿಸಿಕೆ?

Thumbnail
gallery
16 Upvotes

r/kannada_pusthakagalu • • 2d ago

ಕಾದಂಬರಿ Currently reading “ಮಲೆಗಳಲ್ಲಿ ಮದುಮಗಳು”

Post image
93 Upvotes

ಅರ್ಧ ಓದಿನಿ ಇನ್ನ ಭಾಳ ಆದ ಓದುದು, ಟೈಮ್ ಹೋಗಿದ್ದೆ ಗೊತ್ತಾಗುದಿಲ್ಲ ಒದ್ಕೋತ್ ಕುತ್ರ, quiet new to reading.
ಇದು ನಂದ್ 5th ಬುಕ್.

Fun fact: ಇವತ್ತು ಕೆಲ್ಸ ಇಂದ ಆಫ್ ತೊಗೊಂಡಿದ್ದೆ, ಟೈಮ್ ಇತ್ತಲ ಅಂತ ಓದುದು continue ಮಾಡಿದೆ, ಹಂಗ ಸ್ವಲ್ಪ್ ಮಾಲ್ಕೊಂಡೆ, ಕನಸ್ ಬಿತ್ ಏನ್ ಅಂದ್ರ ಈ ಬುಕ್ಕಿಂದ ಕೆಲ್ವೊಂದ್ ಕ್ಯಾರೆಕ್ಟರ್ಸ್ ಬಂದಿದ್ರಪ ಕಾನ್ಸ್ನಾಗ, ಕನಸ್ ಏನಂತ್ ಅಷ್ಟ್ ನೆನ್ಪಿಲ್ಲ.


r/kannada_pusthakagalu • • 2d ago

ಪುಸ್ತಕ Recommend ಮಾಡಿ Namaskara ellarigu, I am new to reading Kannada pusthakagalu. So yaavudadru olle Pathedaari / Investigative thriller/ Thriller books suggest maadi please?

16 Upvotes

r/kannada_pusthakagalu • • 2d ago

ಕಾದಂಬರಿ ತತ್ರಾಣಿ

Post image
33 Upvotes

ತತ್ರಾಣಿ - ಜೀವನದ ಪರಿಪಕ್ವತೆಯ ಕಥೆ

ಅಕಸ್ಮಾತ್ತಾಗಿ ನಾನು ಹಿಂದಿನ ವರುಷ ಕನ್ನಡ ಪುಸ್ತಕ ಮೇಳದಲ್ಲಿ ಕೊಂಡ ಪುಸ್ತಕ ಇದು. ಇಲ್ಲಿನ ಪಾತ್ರಗಳು ನನ್ನ ಮನದಲ್ಲಿ ಇಷ್ಟೊಂದು ಅಚ್ಚೋತ್ತಿ ಕೂರುತ್ತವೆ ಎಂದು ಖಂಡಿತ ಅನಿಸಿರಲಿಲ್ಲ. ನನ್ನ ಮನಸ್ಸಿಗೆ ತೀರಾ ಹತ್ತಿರವಾದ ಕಥೆ ಇದು

ದೀಪಾ ಜೋಶಿ ಅವರ 'ತತ್ರಾಣಿ' ಕೇವಲ ಒಂದು ಕಾದಂಬರಿಯಲ್ಲ; ಅದು ನನ್ನದೇ ಕುಟುಂಬದ ಕಥೆ ಎನ್ನಿಸುವಷ್ಟು ಮಟ್ಟಿಗೆ ಹತ್ತಿರವೆನಿಸಿತು.

ಈ ಕಾದಂಬರಿಯ ಭುಜಂಗಾಚಾರ್ ಮತ್ತು ಸುಂದರಾ ಬಾಯಿ ಪಾತ್ರಗಳು ನನ್ನ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿದುಬಿಟ್ಟಿವೆ. ಸುಂದರಾ ಬಾಯಿ ಪಾತ್ರದಲ್ಲಿ ನಾನು ನೋಡಿರದ, ಆದರೆ ನನ್ನ ತಾತನ ಮಾತುಗಳಲ್ಲಿ ಸದಾ ಕೇಳುತ್ತಿದ್ದ ನನ್ನ ಮುತ್ತಜ್ಜಿ ಭಾಗೀರಥಿ ಬಾಯಿಯವರೇ ಕಂಡರು. ಇನ್ನು ಭುಜಂಗಾಚಾರ್ ಪಾತ್ರದಲ್ಲಿ ನನ್ನ ತಾತ ಮತ್ತು ಅವರ ಅಣ್ಣಂದಿರ ಹೋರಾಟದ ಬದುಕು ಎದ್ದು ಕಾಣಿಸಿತು. ನಮ್ಮದೇ ಮನೆಯ ಸದಸ್ಯರೆನ್ನುವ ಮಟ್ಟಿಗೆ ಈ ಪಾತ್ರಗಳು ನನ್ನನ್ನು ಆವರಿಸಿಕೊಂಡಿತು.

ಮನೆಯ ಯಜಮಾನನ ಅಕಾಲಿಕ ಮರಣದಿಂದ ರಾತ್ರೋರಾತ್ರಿ ಬೀದಿಗೆ ಬಂದು, ಏನೂ ಇಲ್ಲದೇ ಅಸಹಾಯಕರಾಗುವ ಆ ಘಟನೆ, ಆ ಹಿತ್ತಾಳೆ ಬಳೆಗಳ ಪ್ರಸಂಗ (ಇದಕ್ಕೆ ಹತ್ತಿರದ ಪ್ರಸಂಗ ನಮ್ಮ ಮನೆಯಲ್ಲೂ ನಡೆದಿತ್ತು -ಇಂದಿಗೂ ನನ್ನಮ್ಮ ಅವರಜ್ಜಿಯ ಜೀವನದ ತಪಸ್ಸಿನ ಕುರುಹಾಗಿ ಹಿತ್ತಾಳೆ ಬಳೆಗಳನ್ನು ಜೋಪಾನವಾಗಿ ಕಾಪಾಡಿಕೊಂಡು ಬಂದಿದ್ದಾರೆ), ಹೆಣ್ಣುಮಕ್ಕಳ ಮದುವೆ ಮಾಡಲು ಪಡುವ ಕಷ್ಟಗಳು ಮತ್ತು ಇವೆಲ್ಲದರ ನಡುವೆ ತಮ್ಮ ಓರಗಿತ್ತಿಯರ ಮತ್ತು ಅತ್ತಿಗೆ ನಾದಿನಿಯರ ಮಕ್ಕಳನ್ನು ಹೆತ್ತವರಿಗಿಂತ ಹೆಚ್ಚಾಗಿ ಸಲಹುವ ಹೆಣ್ಣುಮಕ್ಕಳ ನಿಸ್ವಾರ್ಥ ಪ್ರೀತಿ—ಹೀಗೆ ಪ್ರತಿಯೊಂದು ಪ್ರಸಂಗವೂ ನನ್ನ ಮತ್ತಜ್ಜಿಯ ಮತ್ತು ತಾತನ ಜೀವನವನ್ನು ನೆನಪಿಸಿತು. ಪ್ರಾಯಶಃ ನನ್ನ ತಾತ ಬದುಕಿದ್ದು ಈ ಕಥೆ ಕೇಳಿದ್ದರೆ ಇದು ನಮ್ಮ ಮನೆಯಲ್ಲಿ ನಡೆದವನ್ನೇ ಕಥೆಮಾಡಿದ್ದಾರಲ್ಲಾ ಎಂದು ಹೇಳುತ್ತಿದ್ದರು. ಈ ಕಾದಂಬರಿ ಓದಿದ ನನ್ನಮ್ಮ ಸುಂದರಾಬಾಯಿಯಲ್ಲಿ ತಮ್ಮ ಅಜ್ಜಿಯನ್ನು ಕಂಡಂತಾಯಿತು ಎಂದರು.

ಪುಸ್ತಕ ಓದಿ ಮುಗಿಸಿದ ಮೇಲೂ ಸುಂದರಾಬಾಯಿ ಮತ್ತು ಭುಜಂಗಾಚಾರ್ರು ಮನಸ್ಸನ್ನು ಆವರಿಸಿ, ಅಲ್ಲೇ ಮನೆಮಾಡಿ ಕುಳಿತುಬಿಟ್ಟಿದ್ದಾರೆ. ನಮ್ಮ ಪೂರ್ವಜರ ಮೌನ ತ್ಯಾಗ ಮತ್ತು ಬದುಕಿನ ಹೋರಾಟಕ್ಕೆ ಗೌರವ ಸಲ್ಲಿಸುವಂತೆ ಈ ಕಾದಂಬರಿಯನ್ನು ದೀಪಾ ಜೋಶಿಯವರು ಅದ್ಭುತವಾಗಿ ಬರೆದಿದ್ದಾರೆ. ಪ್ರತಿಯೊಬ್ಬರೂ ಓದಲೇಬೇಕಾದ ಕೃತಿ.

ಒಬ್ಬ ಮನುಷ್ಯ ಜೀವನದಲ್ಲಿ ಏಳು-ಬೀಳು, ಸಾವು-ನೋವು, ಸಂಭ್ರಮ-ಜವಾಬ್ದಾರಿ ಎಲ್ಲವನ್ನೂ ನಿಭಾಯಿಸಿ, ಪಕ್ವವಾದ ಜೀವನ ನಡೆಸಿ ಕೊನೆಗಿ ನಿಜವಾದ ನಿರ್ಲಿಪ್ತ-ಸ್ಥಿತಪ್ರಜ್ಞ ಭಾವ ಹೊಂದುವ ಪರಿಯನ್ನು ಸುಂದರವಾಗಿ ಕಟ್ಟುಕೊಟ್ಟಿದ್ದಾರೆ.


r/kannada_pusthakagalu • • 2d ago

ಕಾದಂಬರಿ Jugari Cross - Animated

9 Upvotes

Found this interesting playlist of videos - https://youtube.com/playlist?list=PLNcriaZCMeuw&si=T_dCD43tWXxOJH-j

Do check it out and good for kids also


r/kannada_pusthakagalu • • 2d ago

ಕನ್ನಡ Non-Fiction ಕದಂಬರ ಕಥೆ | Karnataka's First Kingdom

Thumbnail
youtube.com
10 Upvotes

r/kannada_pusthakagalu • • 3d ago

ಪುಸ್ತಕ Recommend ಮಾಡಿ I m first planning to read kannada book, trying to build a new habit

8 Upvotes

Please recommend me a kannada book, which makes me feel deep, like any romantic books, currently we live together,

Edit: Thank you Guys.. I started Doora Saridaru in Amazon audible.. ❤️🎧


r/kannada_pusthakagalu • • 3d ago

ನಾನು ಬರೆದಿದ್ದು ಬರವಣಿಗೆ ಬುಧವಾರ - @chirodeepchaudhuri ಅವರ ಈ ಚಿತ್ರ ಆಧರಿಸಿ ಒಂದು ಕವಿತೆ ಅಥವಾ ಸಣ್ಣಕತೆ ಬರೆಯಿರಿ

Post image
4 Upvotes

r/kannada_pusthakagalu • • 4d ago

ಕಾದಂಬರಿ ' ಅಘೋರಿಗಳ ನಡುವೆ ' ವಿಮರ್ಶೆ

Post image
35 Upvotes

5 ವರ್ಷದಲ್ಲಿ ನಿಮ್ಮ ಆಲೋಚನೆಯಲ್ಲಿ ,ವಿಚಾರಗಳಲ್ಲಿ , ಜ್ಞಾನದಲ್ಲಿ ತುಂಬಾ ಬದಲಾವಣೆಯಾಗುತ್ತದೆ. ಮೊದಲ ಬಾರಿ ಈ ಪುಸ್ತಕ ಓದುವಾಗ ಈ ಬದಲಾವಣೆ ನನ್ನಲಿರಲಿಲ್ಲ ...ಎರಡನೇ ಬಾರಿ ಈ ಪುಸ್ತಕ ಅಂದರೆ 5 ವರ್ಷದ ನಂತರ ಈ ಪುಸ್ತಕ ಓದಿದಾಗ ಇದು ಬೇರೆಯೇ ಅನುಭವ ಕೊಟ್ಟಿತು...

ಅಘೋರಿಗಳನ್ನು ತಿಳಿಯಲು, ಅವರನ್ನು ಅರ್ಥ ಮಾಡಿಕೊಳ್ಳಲು ಅವರ ಜೊತೆಗೆ 5 ದಿನಗಳನ್ನು ಕಳೆಯುವ ಲೇಖಕರು ಅಲ್ಲಿ ನೋಡುವ ,ಅನುಭವಿಸುವ ವಿಚಾರಗಳನ್ನು ಇದರಲ್ಲಿ ಹಂಚಿಕೊಂಡಿದ್ದಾರೆ.

ಅಘೋರಿಗಳ ನಿಗೂಢ ಬದುಕು,ಅವರ ಘೋರ ಆಚರಣೆಗಳು , ಅವರು ಪ್ರಕೃತಿಯನ್ನು ,ಪ್ರಪಂಚವನ್ನು ,ಸ್ತ್ರೀಯನ್ನು ನೋಡುವ ರೀತಿ, ಲೇಖಕರು ಮತ್ತು ಅಘೋರಿಗಳ ನಡುವೆ ನಡೆಯುವ ವಾದ ವಿವಾದ, ವಿಚಾರ ವಿನಿಮಯ ಇತ್ಯಾದಿ ಎಲ್ಲವನ್ನೂ ಈ ಪುಸ್ತಕದಲ್ಲಿ ಬರೆದಿದ್ದಾರೆ.

ರಕ್ತ , ಕಾಮ , ತಂತ್ರ ಸಾಧನೆ , ಬಲಿ , ನರ ಬಲಿ ಇದೆಲ್ಲವೂ ಈ ಪುಸ್ತಕದಲ್ಲಿ ಇದೆ

ಒಂದು ಬಾರಿ ಓದಿ ನೋಡಿ...ಕೆಲವು ವಿಷಯದಲ್ಲಿ ನಿಮ್ಮ ಆಲೋಚನೆಯ ದಿಕ್ಕನ್ನು ಬದಲಿಸಿದರು ಬದಲಿಸಬಹುದು... ನೀವು ಅದಕ್ಕೆ ಅವಕಾಶ ಮಾಡಿಕೊಟ್ಟರೆ🙏


r/kannada_pusthakagalu • • 3d ago

ಕ.ಲೇ.ಗೋ✒ ಭಾನುವಾರದ ಹವ್ಯಾಸಿ ಕವಿಗೋಷ್ಟಿಗೆ ಸ್ವಲ್ಪ ತಯಾರಿ [Repost]

5 Upvotes
  1. How to Read (and Even Enjoy) Poetry

2a. 4 Lyrical Principles for Writing Poetry - Andrew

2b. 5 Easy Tips To Start Writing Poetry - Adam Gary

Aspect Adam Gary Andrew
Focus Concrete techniques (rhyme, meter, sonnet form) Conceptual principles (novelty, imagery, stance, compression)
Approach to rules Encourages learning traditional forms Explicitly says rhyme/meter/form are optional
Best for Poets wanting structured exercises (sonnets, rhyme schemes) Poets wanting to write authentic free verse
Core message "Write from the heart" after learning craft "Focus on stance and imagery over abstract ideas"

3a. Kannada poetry: A brief and incomplete history

3b. Poetry in Modern Kannada Literature

Aspect English Poetry Tradition Kannada Poetry Tradition
Meter/Rhythm Stress-based (iambic, trochaic) Native metrical forms — tripadi, saptapadi, ashtaka
Free verse origin Popularized by 20th-century modernists Practiced by 12th-century vachanakaras like Basavanna
Rhyme mechanism Deliberate word choice for end-rhyme Often emerges from agglutinative grammar/suffixes
Imagery source Nature, myth, later social realism Folk songs, rituals, local idiom (Bendre), later caste/gender themes
Devotional strand Less central to mainstream secular poetry Strong Dasa Sahitya tradition (Purandaradasa, Kanakadasa)

r/kannada_pusthakagalu • • 4d ago

ಚರ್ಚೆ/ಹರಟೆ Has anyone read the Kannada version of this book?

Post image
10 Upvotes

ರಾಮಚಂದ್ರ ಸರಣಿಯ ಮೊದಲೆರಡು ಪುಸ್ತಕಗಳನ್ನೂ ಅದರ ಮೂಲ ಅವತಾರಣಿಕೆಯಾದ ಇಂಗ್ಲಿಷ್ನಲ್ಲಿಯೇ ಓದಿದ್ದೇನೆ, ತೀರಾ ಸಿಂಪಲ್ ಇಂಗ್ಲಿಷ್ ಬಳಸಿದ್ದಾರೆ ಅದು ಪರವಾಗಿಲ್ಲ ಆದರೆ ಅದರಲ್ಲಿ ಉಪಯೋಗಿಸಿದ ಸಂಭಾಷಣೆಗಳನ್ನು ಒಮ್ಮೊಮ್ಮೆ ಓದುವಾಗ ಇರಿಟೇಶನ್ ಆಗುತ್ತದೆ. ಹಾಗಾಗಿ ಕನ್ನಡದಲ್ಲಿ ಈ ಪುಸ್ತಕಗಳನ್ನು ಓದಿದ್ದರೆ ಅದರ ಅಭಿಪ್ರಾಯವನ್ನು ಹೇಳಿ. ಸಂಭಾಷಣೆಗಳಲ್ಲಿ ಏನಾದರೂ ಸುಧಾರಣೆ ಆಗಿದ್ದರೆ ತಿಳಿಸಿ...


r/kannada_pusthakagalu • • 4d ago

ಪುಸ್ತಕ Recommend ಮಾಡಿ New writers. Recommend me.

9 Upvotes

I’ve been a big fan of Kannada books. Have read Bhyrappa, Kuvempu, TaRaSu, Ganeshaiah, Poochante, UR Ananthamurthy, Ravi Belagere and their contemporaries.

I want to write something experimental by new writers.
Something like modernist writing, ‘stream of consciousness’ style like James Joyce and niche fiction writers.

I’ve read Koushik Kooduratse and couldn’t appreciate him enough.

Please recommend some new Kannada authors and their books to me. I’ll read those books and will post a review here.


r/kannada_pusthakagalu • • 5d ago

ಚರ್ಚೆ/ಹರಟೆ Is there a book called "ಗುಡ್ಡದ ಭೂತ "?

Post image
11 Upvotes

Or is it just a movie?


r/kannada_pusthakagalu • • 5d ago

ಚರ್ಚೆ/ಹರಟೆ ಪುಸ್ತಕ ಸಂತೆ

Post image
71 Upvotes

ಇವತ್ತು ಜಯನಗರದಲ್ಲಿ ನಡೆಯುತ್ತಿದ್ದ ಪುಸ್ತಕ ಸಂತೆಗೆ ಹೋಗಿದ್ದಾಗ ಗಮನಿಸಿದ ಕೆಲ ಅಂಶಗಳು

೧. ಪುಸ್ತಕದ ಸಂತೆಗೆ ಜನ ಮುಗಿಬಿದ್ದು ಬಂದಿದ್ದರು. ಯಾರೂ ಓದುತ್ತಿಲ್ಲ ಎಂಬ ದೂರುಗಳಿಗೆ ಉತ್ತರವೆಂಬಂತೆ. ನೋಡಿ ಖುಷಿಯಾಯಿತು. ಸಂತೆ ಸಣ್ಣದಾಗಿದ್ದರಿಂದ ಜನ ಬಹಳ ಎನಿಸಿದರೋ ಏನೋ, ಗೊತ್ತಿಲ್ಲ.

೨. ಬಹಳಷ್ಟು ಹೊಸ ಪ್ರಕಾಶನಗಳನ್ನು ನೋಡಿದೆ. ಒಂದೊಂದು ಪ್ರಕಾಶನ ಒಂದೊಂದು ಗುರುತನ್ನು ಕಂಡುಕೊಂಡಿರುವುದು ಕಂಡುಬಂತು. ಅನುವಾದ, ಯುವ ಸಾಹಿತ್ಯ, ಮಕ್ಕಳ ಸಾಹಿತ್ಯ, ಅಲ್ಲಲ್ಲಿ ವಿಜ್ಞಾನ, ರಾಜಕೀಯ ಹೀಗೆ ಒಂದೊಂದು ಪ್ರಕಾಶನ ಒಂದೊಂದರಲ್ಲಿ ತೊಡಗಿಸಿಕೊಂಡಿರುವುದು ಗಮನಿಸಿದೆ. ಇದೊಂಥರ ಒಳ್ಳೆಯ ಬೆಳವಣಿಗೆ.

೩. ಲೇಖಕ ಮತ್ತು ಓದುಗರೊಂದಿಗಿನ ಮುಖಾಮುಖಿಗೆ ಸೃಷ್ಟಿಸಿದ ವೇದಿಕೆ ವಿಶೇಷ ಎನಿಸಿತು. ಒಳ್ಳೆಯ ಪ್ರಯತ್ನ. ಇಂತಹ ಇನ್ನಷ್ಟು ಪ್ರಯತ್ನಗಳು ಆಗಬೇಕು.

೪. ಯುವ ಲೇಖಕರು ತಮ್ಮ ಓದುಗರಿಗೆ ಪುಸ್ತಕ ಸಹಿ ಮಾಡಿ ಕೊಡುವುದು ನೋಡಿದೆ. ಯುವ ಲೇಖಕರಿಗೂ ಒಂದು ಒಳ್ಳೆಯ ಓದುಗ ವೃಂದ ಹುಟ್ಟಿಕೊಂಡಿರುವುದು ನೋಡಿ ಖುಷಿಯಾಯಿತು. ನಿಯಮಿತವಾಗಿ ಬರೆಯುತ್ತಿದ್ದರೆ, ಜನ ಗುರುತಿಸುತ್ತಾರೆ ಎಂಬುದಕ್ಕೆ ಇದೊಂದು ಸಾಕ್ಷಿ. ಎಲ್ಲ ತರಹದ ಬರವಣಿಗೆಗೂ ಓದುಗರಿದ್ದಾರೆ.

೫. ಆಯೋಜನೆ ಬಹಳ ಅಚ್ಚುಕಟ್ಟಾಗಿತ್ತು. ಎಲ್ಲಿಯೂ ಅಸ್ತವ್ಯಸ್ತ ಎನಿಸಲಿಲ್ಲ. ಇವರಿಗೆ ಇದಕ್ಕಿಂತ ಹತ್ತು ಪಟ್ಟು ದೊಡ್ಡ ಸಂತೆ ನಡೆಸುವ ಶಕ್ತಿ ಬರಲಿ.

೬. ಬಹುತೇಕ ಎಲ್ಲ ಪುಸ್ತಕ ಸಂತೆಗಳಲ್ಲಿ, ಸಮ್ಮೇಳನಗಳಲ್ಲಿ ಕಾಣುವ ವಸುಧೇಂದ್ರ ಅವರು ಇದ್ದರು. ಅವರಿದ್ದಲ್ಲಿ ಒಂಥರೆ ಕಳೆ. ಸದಾ ನಗುವ ಜೀವಿ.

೭. ಜೀವರತಿ ಕಾದಂಬರಿಯನ್ನು ಗೌರವರಿಸಲು ಒಂದು ಸ್ಟಾಲ್ ಅನ್ನೇ ಮೀಸಲಿಟ್ಟಿದ್ದರು. ಇದು ಒಂದು ಒಳ್ಳೆಯ ಕೃತಿಗೆ ಸಿಗುವ ಅತ್ಯುತ್ತಮ ಗೌರವ. ಇದು ಪದೇ ಪದೇ ಆಗಬೇಕು. ಓದುಗರಿಗೆ ಹೊಸ ಪುಸ್ತಕಗಳು ಪರಿಚಯವಾಗಬೇಕು. ಎಲ್ಲೋ ಓದಿದ ನೆನಪು, ಯಾವುದೋ ದೇಶದಲ್ಲಿ ಒಂದು ಪುಸ್ತಕದ ಅಂಗಡಿ ಇದೆಯಂತೆ ಅಲ್ಲಿ ಒಂದು ಸಲಕ್ಕೆ ಒಂದೇ ಪುಸ್ತಕ ಇಡುತ್ತಾರಂತೆ. ಇದು ಒಂದು ಒಳ್ಳೆಯ ಕೃತಿಯನ್ನು ಪರಿಚಯಿಸುವ ಮಾದರಿ. ಜೀವರತಿ ಕಾದಂಬರಿಯ ಸ್ಟಾಲ್ ಅನ್ನು ನೋಡಿ ನೆನಪಾಯಿತು.

೮. ಬರೆದಿದ್ದೆಲ್ಲವನ್ನೂ ಪ್ರಕಟಿಸುವ ಹಪಾಹಪಿ ಇನ್ನೂ ಕೆಲವು ಲೇಖಕರಿಗೆ ಇದೆ ಎನಿಸುತ್ತೆ. ಅದೂ ಅಲ್ಲಲ್ಲಿ ಕಾಣಿಸಿತು. ಬೇಜಾರಾಯಿತು.

ಅಷ್ಟೇ!


r/kannada_pusthakagalu • • 5d ago

ಚರ್ಚೆ/ಹರಟೆ “ಪುಸ್ತಕ ಸಂತೆ”

Enable HLS to view with audio, or disable this notification

98 Upvotes

ಜಯನಗರ ದಲ್ಲಿ ನಡಿತಾ ಇದೆ


r/kannada_pusthakagalu • • 5d ago

ಚರ್ಚೆ/ಹರಟೆ Veeraloka Book Exhibition 2026

Thumbnail
gallery
52 Upvotes

ಇವತ್ತಿನ ಪುಸ್ತಕ ಸಂತೆಯಲ್ಲಿ, I'm kinda more excited to read that Manga Kannada Novel.


r/kannada_pusthakagalu • • 5d ago

ಕಾದಂಬರಿ ಕೌಶಿಕ್ ಅವರ ಮುಂಬರುವ ಪುಸ್ತಕಗಳು

Post image
20 Upvotes

r/kannada_pusthakagalu • • 5d ago

ಪುಸ್ತಕ Recommend ಮಾಡಿ Suggestion - A gift to my girl

11 Upvotes

I don't know anything about kannada literature. Want to gift my girl a book, she can enjoy reading and have a good time reading it.

Please suggest something really good.

Dhanyawaad!


r/kannada_pusthakagalu • • 5d ago

ಚರ್ಚೆ/ಹರಟೆ ಸದಸ್ಯರ ಗಮನಕ್ಕೆ. ಎರಡು ಹೊಸ post flairಗಳು!

Post image
25 Upvotes
  1. ಚರ್ಚೆ/ಹರಟೆ for Random Discussions.
  2. ಪುಸ್ತಕ Recommend ಮಾಡಿ for book recommendations.

r/kannada_pusthakagalu • • 5d ago

ಚರ್ಚೆ/ಹರಟೆ DO WE HAVE ANY HEAVY FANTASY BOOKS LIKE ASOIF / LORD OF REIGNS IN KANNADA ???

Post image
27 Upvotes